ವಿಜ್ಞಾನ ಉದ್ಯಾನ ವನ

ಇಲ್ಲಿರುವ ವಿಶಾಲವಾದ ವಿಜ್ಞಾನ ಉದ್ಯಾನವನ ಎಲ್ಲ ಮಕ್ಕಳಿಗೆ ಒಂದು ಹೊಸ ಲೋಕವನ್ನೇ ಪರಿಚಯಿಸುತ್ತದೆ. ವಿಜ್ಞಾನದ ತತ್ವಗಳ ಪರಿಣಾಮದ ಆಧಾರದಲ್ಲಿ ನಿರ್ಮಿಸಿದ ದೊಡ್ಡ ಪ್ರಮಾಣದ ಆಟಿಕೆಗಳ ಮೂಲಕ ಹೇಗೆ ವಿಜ್ಞಾನ ಕಲಿಯಬಹುದು ಎನ್ನುವುದನ್ನು ಇಲ್ಲಿ ನೋಡಬಹುದು. ಸಂದರ್ಶಕರು ತಮ್ಮ ಮಕ್ಕಳೊಂದಿಗೆ ಬಂದಾಗ ಹಲವು ವೈಜ್ಞಾನಿಕ ವಿಷಯಗಳನ್ನು ಸುಲಭವಾಗಿ ಅವರಿಗೆ ತಿಳಿಸಬಹುದು. ಡೈನೊಸಾರ್‍ಗಳ ವಿವಿಧ ಆಕೃತಿಗಳಿಗೆ ಅನುಗುಣವಾಗಿ ಇರಿಸಿದ ಮಾದರಿಗಳು ಚಿಕ್ಕ ಮಕ್ಕಳಿಗೆ ಆಸಕ್ತಿ ಮತ್ತು ಅಚ್ಚರಿ ಮೂಡಿಸುತ್ತವೆ.