ಜೀವಿವೈವಿಧ್ಯತೆಯ ಗ್ಯಾಲರಿ

ವಿಶ್ವದಲ್ಲಿ ಜೀವಿವೈವಿಧ್ಯತೆಗೆ ಪಶ್ಚಿಮ ಘಟ್ಟ ಹೆಸರುವಾಸಿ. ಅದರ ತಪ್ಪಲಲ್ಲಿರುವ ಪಿಲಿಕುಳದ ವಿಜ್ಞಾನ ಕೇಂದ್ರ ಜೀವಿವೈವಿಧ್ಯತೆಯ ವಿಶೇಷಗಳು, ಅದನ್ನು ಕಾಪಾಡುವ ಅವಶ್ಯಕತೆ, ಜೀವಿಗಳ ಉಗಮ, ಅಳಿವು ಇತ್ಯಾದಿಗಳ ಬಗ್ಗೆ ಜನರಿಗೆ ತಿಳಿಹೇಳುವ ಪ್ರಯತ್ನವನ್ನು ಈ ಗ್ಯಾಲರಿಯ ಮೂಲಕ ಮಾಡುತ್ತಿದೆ. ಭಾರತದಲ್ಲಿ ಜೀವಿವೈವಿಧ್ಯತೆಯ ಇನ್ನೊಂದು ಗ್ಯಾಲರಿ ಈಗ ಬೇರೆಲ್ಲೂ ಇಲ್ಲ. ಜೀವಿಶಾಸ್ತ್ರದ ಅಧ್ಯಯನದಲ್ಲಿ ತೊಡಗಿರುವವರಿಗೆ ಇದೊಂದು ನೋಡಲೇಬೇಕಾದ ಗ್ಯಾಲರಿ.

ಹೆಚ್ಚಿನ ಮಾಹಿತಿಗಾಗಿ ಚಿತ್ರದ ಮೇಲೆ ಕ್ಲಿಕಿಸಿ.